ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 129,024 ಇಂದಿನ ಓದುಗರು: 657 🟢 ಈಗ ಆನ್‌ಲೈನ್: 9
LATEST NEWS

ಇತ್ತೀಚಿನ ಸುದ್ದಿಗಳು

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ ಜಿಲ್ಲೆಗಳು →
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಲೇಖನ ಹೊಸಪೇಟೆ ಮಂತ್ರಾಲಯ ಅರಕೇರಾ ಬೆಂಗಳೂರು ಬಾಗಲಕೋಟೆ ನವದೆಹಲಿ ಕಲಬುರಗಿ ಮೈಸೂರು ಗಂಗಾವತಿ ಶಹಾಪುರ ಮೀರುತ್ ಹೈದರಾಬಾದ್ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 1306 ಸುದ್ದಿಗಳಲ್ಲಿ 976–1000 ಸುದ್ದಿಗಳು

ಲಿಂಗಸುಗೂರು ರಾಯಚೂರು

ಮೂರು ಓಟಗಳಲ್ಲಿ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ವೆಂಕಟೇಶ್ ಆಯ್ಕೆ

ಹಟ್ಟಿ ಚಿನ್ನದ ಗಣಿ: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ವೆಂಕಟೇಶ್ ತಂದೆ ಲಿಂಗರಾಜ ಅವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂರು ವೈಯಕ್ತಿಕ ಓಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮುಂದೆ ಓದಿ →
ರಾಯಚೂರು

‘ಭಾರತ್ ಕೋ ಜಾನೋ’ ರಸಪ್ರಶ್ನೆಯಲ್ಲಿ ಬಸವಶ್ರೀ ಶಾಲೆಗೆ ದ್ವಿತೀಯ ಸ್ಥಾನ

ರಾಯಚೂರು: ಭಾರತ ವಿಕಾಸ ಪರಿಷತ್ತು ರಾಯಚೂರು ಶಾಖೆ ವತಿಯಿಂದ ನಗರದ ಬಿಆರ್‌ಬಿ ಕಾಲೇಜಿನಲ್ಲಿ ಸೆ.27ರಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಭಾರತ್ ಕೋ ಜಾನೋ–2026’ ರಸಪ್ರಶ್ನೆ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಬಸವಶ್ರೀ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಮುಂದೆ ಓದಿ →
ಮಾನ್ವಿ ರಾಯಚೂರು

ನೂತನ ಬಸವೇಶ್ವರ ವೃತ್ತ ನಿರ್ಮಾಣ ಸ್ಥಳ ಪರಿಶೀಲಿಸಿದ ಎನ್.ಎಸ್. ಬೋಸರಾಜು

ಮಾನ್ವಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತದ ಸ್ಥಳವನ್ನು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಪರಿಶೀಲಿಸಿದರು.

ಮುಂದೆ ಓದಿ →
ಮಾನ್ವಿ ರಾಯಚೂರು

ಪಂಪ್‌ಸೆಟ್‌ಗಳಿಗೆ ನಿರಂತರ 10 ತಾಸು ವಿದ್ಯುತ್ ನೀಡಲು ನೀರಮಾನ್ವಿ ರೈತರ ಆಗ್ರಹ

ಮಾನ್ವಿ: ಬರಗಾಲದ ಹಿನ್ನೆಲೆಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ತಾಲೂಕಿನ ನೀರಮಾನ್ವಿ ಗ್ರಾಮದ ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ ನಿರಂತರವಾಗಿ 10 ತಾಸು ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತರು ತಹಶೀಲ್ದಾರ್ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿದರು.

ಮುಂದೆ ಓದಿ →
ದೇವದುರ್ಗ ರಾಯಚೂರು

ಬರ ಪರಿಹಾರ, ನೀರಾವರಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ದೇವದುರ್ಗ, ಸೆ.28: ದೇವದುರ್ಗ ಹಾಗೂ ಅರಕೇರಾ ತಾಲೂಕುಗಳಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಗೆ ತುರ್ತಾಗಿ ಸ್ಪಂದಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು, ರೈತರಿಗೆ ಸಮರ್ಪಕ ಬೆಳೆ ಪರಿಹಾರ ನೀಡಬೇಕು ಹಾಗೂ ನೀರಾವರಿ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಭಾನುವಾರ ದೇವದುರ್ಗದಲ್ಲಿ…

ಮುಂದೆ ಓದಿ →
ರಾಯಚೂರು

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ, ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಧರಣಿ

ರಾಯಚೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಎಂದು ಆಗ್ರಹಿಸಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.

ಮುಂದೆ ಓದಿ →
ರಾಯಚೂರು

ಎಸ್‌ಐಆರ್ ಸ್ಥಗಿತ, ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ತಡೆ ನೀಡಬೇಕು ಹಾಗೂ ಮತದಾರರ ಪಟ್ಟಿಯಿಂದ ತಪ್ಪಾಗಿ ಕೈಬಿಡಲಾದ ಅರ್ಹರ ಹೆಸರುಗಳನ್ನು ಮರುಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಎಡಪಕ್ಷಗಳ ನೇತೃತ್ವದಲ್ಲಿ ಸೋಮವಾರ…

ಮುಂದೆ ಓದಿ →
ರಾಯಚೂರು

ಕೆ-ಸೆಟ್ ಪರೀಕ್ಷಾ ಸಿದ್ಧತೆಗೆ ಅ.4ರಂದು ವಿಶೇಷ ಕಾರ್ಯಾಗಾರ

ರಾಯಚೂರು, ಸೆ.28: ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)-2026ಕ್ಕೆ ಸಜ್ಜಾಗುತ್ತಿರುವ ಅಭ್ಯರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಅಶ್ವಮೇಧ ಫೌಂಡೇಶನ್ ವತಿಯಿಂದ ಅ.4ರಂದು ಕೆ-ಸೆಟ್ ಪತ್ರಿಕೆ-1ರ ಸಾಮಾನ್ಯ ಅಧ್ಯಯನ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ರಮೇಶ್…

ಮುಂದೆ ಓದಿ →
ರಾಯಚೂರು

ವಾಲ್ಮೀಕಿ ವಿವಿ ಆಡಳಿತದ ಆರೋಪಗಳಿಗೆ ದಾಖಲೆ ಸಹಿತ ಸ್ಪಷ್ಟನೆ ನೀಡಲು ಆಗ್ರಹ

ರಾಯಚೂರು, ಸೆ.28: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ, ತಾತ್ಕಾಲಿಕ ಸಿಬ್ಬಂದಿ ನೇಮಕ, ಹೆಚ್ಚುವರಿ ಹುದ್ದೆಗಳ ಜವಾಬ್ದಾರಿ ಹಂಚಿಕೆ ಹಾಗೂ ಹಣಕಾಸು ನಿರ್ವಹಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿ ಆ.7ರಂದು ಸಲ್ಲಿಸಿದ ಮನವಿಗೆ ಇದುವರೆಗೂ ಯಾವುದೇ ಉತ್ತರ…

ಮುಂದೆ ಓದಿ →
ರಾಯಚೂರು

ಬರ ಪರಿಹಾರಕ್ಕೆ ಆಗ್ರಹಿಸಿ ಸೆ.30ರಂದು ಜೆಡಿಎಸ್ ಪ್ರತಿಭಟನೆ

ರಾಯಚೂರು: ಬರ ಪರಿಸ್ಥಿತಿಯಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಬೆಳೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆ.30ರಂದು ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಯಚೂರು ಗ್ರಾಮೀಣ ಜೆಡಿಎಸ್ ಮುಖಂಡ ಸಣ್ಣ ನರಸಿಂಹ…

ಮುಂದೆ ಓದಿ →
ರಾಯಚೂರು

ಭಗತ್ ಸಿಂಗ್ ಆದರ್ಶಗಳು ಯುವಜನತೆಗೆ ಪ್ರೇರಣೆಯಾಗಲಿ

ರಾಯಚೂರು, ಸೆ.28: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ 119ನೇ ಜನ್ಮದಿನವನ್ನು ನಗರದ ಸ್ಟೇಷನ್ ರಸ್ತೆಯ ಸಾರ್ವಜನಿಕ ಉದ್ಯಾನವನದಲ್ಲಿ ರಾಯಚೂರು ವಾಕಿಂಗ್ ಕ್ಲಬ್ ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ವತಿಯಿಂದ ಆಚರಿಸಲಾಯಿತು.

ಮುಂದೆ ಓದಿ →
ರಾಯಚೂರು

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ರಾಯಚೂರು ವಿದ್ಯಾರ್ಥಿಗಳ ಪದಕ ಬೇಟೆ

ರಾಯಚೂರು, ಸೆ.27: ತೆಲಂಗಾಣದ ಮಕ್ತಲ್‌ನ ರಾಯಲ್ ಪ್ಯಾಲೇಸ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಡು ಮತ್ತು ಕುಂಗ್ ಫು ಚಾಂಪಿಯನ್‌ಶಿಪ್–2026ರಲ್ಲಿ ರಾಯಚೂರಿನ ಶ್ರೀ ಸೂಗುರೇಶ್ವರ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಮುಂದೆ ಓದಿ →
ಮಂತ್ರಾಲಯ

ಶ್ರೀ ಸತ್ಯಾತ್ಮತೀರ್ಥರ ರಸ್ತೆ ಅಪಘಾತಕ್ಕೆ ಶ್ರೀ ಸುಬುಧೇಂದ್ರ ತೀರ್ಥರ ಕಳವಳ

ಮಂತ್ರಾಲಯ, ಸೆ.27: ಉತ್ತರಾಧಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ರಸ್ತೆ ಅಪಘಾತಕ್ಕೀಡಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಮುಂದೆ ಓದಿ →
ಮಾನ್ವಿ ರಾಯಚೂರು

ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಸಜ್ಜಾಗಿದೆ: ಎನ್.ಎಸ್. ಬೋಸರಾಜು

ಮಾನ್ವಿ, ಸೆ.27: ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ರೈತರು ಹಾಗೂ ಗ್ರಾಮೀಣ ಜನರಿಗೆ ತಕ್ಷಣದ ನೆರವು ಒದಗಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.

ಮುಂದೆ ಓದಿ →
ಮಾನ್ವಿ ರಾಯಚೂರು

ಬಲಗೈ ಸಮುದಾಯಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ

ಮಾನ್ವಿ: ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಜಿಲ್ಲೆಯ ವಿವಿಧ ತಾಲೂಕು ಸಮಿತಿಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಮುಂದೆ ಓದಿ →
ಮಾನ್ವಿ ರಾಯಚೂರು

ಹಾನಗಲ್ ಕುಮಾರ ಶಿವಯೋಗಿಗಳ ಜ್ಯೋತಿ ರಥಯಾತ್ರೆಗೆ ಮಾನ್ವಿಯಲ್ಲಿ ಭಕ್ತಿಪೂರ್ವಕ ಸ್ವಾಗತ

ಮಾನ್ವಿ: ಲಿಂ. ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ 159ನೇ ಜಯಂತಿ ಅಂಗವಾಗಿ ಮಾನ್ವಿ ನಗರಕ್ಕೆ ಆಗಮಿಸಿದ ಜ್ಯೋತಿ ರಥಯಾತ್ರೆ ಹಾಗೂ ಪಾದಯಾತ್ರೆಯನ್ನು ಪಟ್ಟಣದಲ್ಲಿ ಭಕ್ತಿಭಾವದಿಂದ ಬರಮಾಡಿಕೊಳ್ಳಲಾಯಿತು.

ಮುಂದೆ ಓದಿ →
ರಾಯಚೂರು

ಪುರಾತನ ಬಾವಿಯ ಕಸ ತೆರವು ಮಾಡಿ ಗಣೇಶ ವಿಸರ್ಜಿಸಿದ ಬಾಲರಾಮ ಶಾಲೆ ಯುವಕರು

ರಾಯಚೂರು: ನಗರದ ವಿವಿಧ ಗಣೇಶ ಮೂರ್ತಿಗಳನ್ನು ಸಾಮಾನ್ಯವಾಗಿ ಖಾಸಭಾವಿಯಲ್ಲಿ ನೀರು ತುಂಬಿಸಿ ವಿಸರ್ಜಿಸಲಾಗುತ್ತದೆ. ಆದರೆ ಪಟೇಲ್ ರಸ್ತೆಯ ಬಾಲರಾಮ ಶಾಲೆಯ ಶುದ್ಧ ಮಣ್ಣಿನ ಗಣೇಶ ಮೂರ್ತಿಯನ್ನು ಸಂಪ್ರದಾಯದಂತೆ ಬಸನಭಾವಿ ವೃತ್ತದಲ್ಲಿರುವ ಶ್ರೀ ಮಾರುತಿ ದೇವಸ್ಥಾನದ ಹಿಂಭಾಗದ ಪುರಾತನ ಬಾವಿಯಲ್ಲಿ ವಿಸರ್ಜಿಸಲಾಯಿತು.

ಮುಂದೆ ಓದಿ →
ರಾಯಚೂರು

175 ವರ್ಷಗಳ ಸಂಪ್ರದಾಯದಂತೆ ಬಾಲರಾಮ ಶಾಲೆಯ ಗಣೇಶ ವಿಸರ್ಜನೆ

ರಾಯಚೂರು: ನಗರದ ಸರದಾರ ವಲ್ಲಭಭಾಯಿ ಪಟೇಲ್ ರಸ್ತೆಯಲ್ಲಿರುವ ಬಾಲರಾಮ ಶಾಲೆಯಲ್ಲಿ ಕಳೆದ 175 ವರ್ಷಗಳಿಂದ ಶುದ್ಧ ಮಣ್ಣಿನಿಂದ ಒಂದೇ ಮಾದರಿಯಲ್ಲಿ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸುವ ಸಂಪ್ರದಾಯ ಈ ವರ್ಷವೂ ಭಕ್ತಿಭಾವದಿಂದ ಮುಂದುವರಿಯಿತು.

ಮುಂದೆ ಓದಿ →
ಅರಕೇರಾ ರಾಯಚೂರು

ಸತ್ಯದ ಅರಿವಿನಿಂದಲೇ ಪರಮಾರ್ಥದ ಅನುಭವ: ರಾಜಯೋಗಿ ಶಿವನಾಥ ಮಹಾರಾಜ

ಅರಕೇರಾ, ಸೆ.27: ಸತ್ಸಂಗ ಎಂದರೆ ಕೇವಲ ಎಲ್ಲರೂ ಒಂದೆಡೆ ಸೇರಿ ಕುಳಿತುಕೊಳ್ಳುವುದಲ್ಲ, ಸತ್ಯದ ಸಂಗ ಮಾಡುವುದು. ಸತ್ಯದ ಅರಿವು ಮೂಡಿದಾಗ ಮಾತ್ರ ಜೀವನದ ಅನುಭವಕ್ಕೆ ಪರಮಾರ್ಥದ ಅರ್ಥ ಸಿಗುತ್ತದೆ ಎಂದು ಪಂಜಾಬ್ ರಾಜ್ಯದ ಜಲಂಧರ ವಾಲ್ಮೀಕಿ ಆಶ್ರಮದ ಪೀಠಾಧಿಪತಿ ರಾಜಯೋಗಿ ಶಿವನಾಥ ಮಹಾರಾಜರು ಹೇಳಿದರು.

ಮುಂದೆ ಓದಿ →
ದೇವದುರ್ಗ ರಾಯಚೂರು

ಚಿಕ್ಕಹೊನ್ನಕುಣಿ ನೀರಾವರಿ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆಗೆ ಕರೆ

ದೇವದುರ್ಗ, ಸೆ.27: ರೈತರಿಗೆ ಅನುಕೂಲವಾಗಿರುವ ಚಿಕ್ಕಹೊನ್ನಕುಣಿ ನೀರಾವರಿ ಇಲಾಖೆಯ ಕಚೇರಿಯನ್ನು ಸ್ಥಳಾಂತರಿಸಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಶಾಸಕಿ ಕರಿಯಮ್ಮ ಜಿ.

ಮುಂದೆ ಓದಿ →
ರಾಯಚೂರು

ಐಎಂಎ ರಾಯಚೂರು ಘಟಕಕ್ಕೆ ನೂತನ ಸಾರಥ್ಯ: ಡಾ. ಬಸವರಾಜ ಎಂ. ಪಾಟೀಲ್ ಅಧ್ಯಕ್ಷರು

ರಾಯಚೂರು: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ರಾಯಚೂರು ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.

ಮುಂದೆ ಓದಿ →
ಲಿಂಗಸುಗೂರು ರಾಯಚೂರು

ಅಶೋಕ್ ವಿ. ಕರಡಕಲ್ ಅವರಿಗೆ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಲಿಂಗಸುಗೂರು: ಪಟ್ಟಣದ ವಿಜಯ ಮಹಾಂತೇಶ್ವರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಟ್ಟಿ ಚಿನ್ನದ ಗಣಿ ವಿನಾಯಕ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ್ ವಿ. ಕರಡಕಲ್ ಅವರಿಗೆ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುಂದೆ ಓದಿ →
ಕುಷ್ಟಗಿ ಕೊಪ್ಪಳ

ವೃದ್ಧರ ಸೇವೆ ಈಶ್ವರ ಸೇವೆಯಂತೆ: ಗೌರಮ್ಮ ಕುಡತನಿ

ಕುಷ್ಟಗಿ: ಇನ್ನರ್ ವ್ಹೀಲ್ ಕ್ಲಬ್ ಆಫ್ ಕುಷ್ಟಗಿ ಅಧ್ಯಕ್ಷೆ ಗೌರಮ್ಮ ಕುಡತನಿ ಅವರ ನೇತೃತ್ವದಲ್ಲಿ ಇಳಕಲ್‌ನ ಸುರಕ್ಷಾ ಸೇವಾ ಸಂಸ್ಥೆಯ ಅನಾಥಾಶ್ರಮ ಹಾಗೂ ವೃದ್ಧಾಶ್ರಮದಲ್ಲಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮುಂದೆ ಓದಿ →
ಲಿಂಗಸುಗೂರು ರಾಯಚೂರು

ಬಂಜಾರ ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಿ: ಹನುಮಂತ ರಾಠೋಡ

ಲಿಂಗಸೂಗೂರು: ಬಂಜಾರ (ಲಂಬಾಣಿ) ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಹನುಮಂತ ರಾಠೋಡ ಆಗ್ರಹಿಸಿದರು.

ಮುಂದೆ ಓದಿ →
ಲಿಂಗಸುಗೂರು ರಾಯಚೂರು

ಹೂಗಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿ: ಮಲ್ಲಪ್ಪ ಹೂಗಾರ ಒತ್ತಾಯ

ಲಿಂಗಸುಗೂರು: ಹೂಗಾರ ಸಮಾಜವು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದ್ದು, ಹೂ ವ್ಯಾಪಾರ, ಪೂಜಾರಿಕೆ ಸೇರಿದಂತೆ ಸಾಂಪ್ರದಾಯಿಕ ಕಾಯಕಗಳನ್ನು ಅವಲಂಬಿಸಿರುವ ಅನೇಕ ಕುಟುಂಬಗಳು ಇಂದಿಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.

ಮುಂದೆ ಓದಿ →