ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 129,076 ಇಂದಿನ ಓದುಗರು: 687 🟢 ಈಗ ಆನ್‌ಲೈನ್: 7
LATEST NEWS

ಇತ್ತೀಚಿನ ಸುದ್ದಿಗಳು

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ ಜಿಲ್ಲೆಗಳು →
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಲೇಖನ ಹೊಸಪೇಟೆ ಮಂತ್ರಾಲಯ ಅರಕೇರಾ ಬೆಂಗಳೂರು ಬಾಗಲಕೋಟೆ ನವದೆಹಲಿ ಕಲಬುರಗಿ ಮೈಸೂರು ಗಂಗಾವತಿ ಶಹಾಪುರ ಮೀರುತ್ ಹೈದರಾಬಾದ್ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 1307 ಸುದ್ದಿಗಳಲ್ಲಿ 476–500 ಸುದ್ದಿಗಳು

ರಾಯಚೂರು

ಭೋವಿ ಸಮಾಜದ ಆಯುಧ ಪೂಜೆಯಲ್ಲಿ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಭಾಗಿ

ರಾಯಚೂರು ನಗರದ ಶ್ರೀ ಸಿದ್ದರಾಮೇಶ್ವರ ಮಂಟಪದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಭೋವಿ ಸಮಾಜದ ವತಿಯಿಂದ ಆಯುಧ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಯಚೂರು ನಗರ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಭಾಗವಹಿಸಿ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡರು.

ಮುಂದೆ ಓದಿ →
ರಾಯಚೂರು

ವಿವಿಧ ದೇವಾಲಯಗಳಿಗೆ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಭೇಟಿ

ನವರಾತ್ರಿ ಮಹೋತ್ಸವದ ಅಂಗವಾಗಿ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ ರಾಯಚೂರು ನಗರ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಅವರು ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.

ಮುಂದೆ ಓದಿ →
ರಾಯಚೂರು

ಇಷ್ಟಲಿಂಗ ಪೂಜೆಯಲ್ಲಿ ಶಾಸಕ ಬಸನಗೌಡ ದದ್ದಲ್ ಭಾಗಿ: ಕಾಯಕ ಮತ್ತು ದಾಸೋಹದ ಮಹತ್ವ ಪ್ರತಿಪಾದನೆ

ನವರಾತ್ರಿ ಮಹೋತ್ಸವದ ಅಂಗವಾಗಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಲ್ತಾನಪುರ, ಆಸ್ಕಿಹಾಳ ಹಾಗೂ ಮಾರೆಮ್ಮ ಕ್ಯಾಂಪ್‌ಗಳಿಗೆ ಭೇಟಿ ನೀಡಿದ ಶಾಸಕ ಬಸನಗೌಡ ದದ್ದಲ್ ಅವರು, ಜಗನ್ಮಾತೆ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮುಂದೆ ಓದಿ →
ರಾಯಚೂರು

ಆಯುಧ ಪೂಜೆ ಮೂಲಕ ಶ್ರಮದ ಮಹತ್ವ ಸಾರಿದ ಬೋವಿ ಸಮಾಜ: ಶಾಸಕ ಬಸನಗೌಡ ದದ್ದಲ್

ದುಡಿಮೆಯನ್ನೇ ಬದುಕಿನ ಆಧಾರವಾಗಿಸಿಕೊಂಡಿರುವ ಬೋವಿ ಸಮಾಜವು ತನ್ನ ಸಾಂಪ್ರದಾಯಿಕ ವೃತ್ತಿಗೆ ಬಳಸುವ ಉಪಕರಣಗಳನ್ನು ಪೂಜಿಸುವ ಮೂಲಕ ಶ್ರಮ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದೆ ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.

ಮುಂದೆ ಓದಿ →
ದೇವದುರ್ಗ ರಾಯಚೂರು

ಅಕ್ರಮ ಫಿಲ್ಟರ್ ಮರಳು ದಂಧೆ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ

ಜಿಲ್ಲೆಯ ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಅಕ್ರಮ ಫಿಲ್ಟರ್ ಮರಳು ತಯಾರಿಕೆ ಹಾಗೂ ಸಾಗಾಟ ನಿರಂತರವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಇಲಾಖೆಗಳ ಕಾರ್ಯವೈಖರಿ ವಿರುದ್ಧ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ →
ರಾಯಚೂರು

ಪರಿಸರ ಸಂರಕ್ಷಣೆಯ ಮೂಲಕ ದಸರಾ ಆಯುಧ ಪೂಜೆ ಆಚರಿಸಿದ ನಿವೃತ್ತ ನೌಕರರು

ನಾಡಹಬ್ಬ ದಸರಾ ಆಯುಧ ಪೂಜೆಯ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.

ಮುಂದೆ ಓದಿ →
ಸಿಂಧನೂರು ರಾಯಚೂರು

ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾಗಿ ಪದ್ಮಾ ಸಜ್ಜನ್, ಪ್ರಧಾನ ಕಾರ್ಯದರ್ಶಿಯಾಗಿ ಸರಸ್ವತಿ ಆಯ್ಕೆ

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಪದವೀಧರ ಶಿಕ್ಷಣ ಇಲಾಖೆಯ ಪದ್ಮಾ ಸಜ್ಜನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸರಸ್ವತಿ ಬಾಯಪ್ಪ ಕಡ್ಡೋಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ತಿಳಿಸಿದ್ದಾರೆ.

ಮುಂದೆ ಓದಿ →
ರಾಯಚೂರು

ಮನಸ್ಸಿನ ಒತ್ತಡ ನಿವಾರಿಸಿ ನೆಮ್ಮದಿ ನೀಡುವ ಶಕ್ತಿ ಸಂಗೀತಕ್ಕಿದೆ: ಸಾಹಿತಿ ತಾಯಪ್ಪ ಮರ್ಚಟಹಾಳ

ಸಂಗೀತವು ಮನುಷ್ಯನ ಮನಸ್ಸಿಗೆ ಸಂತೋಷ ಮತ್ತು ನೆಮ್ಮದಿ ನೀಡುವುದರೊಂದಿಗೆ ದಿನನಿತ್ಯದ ಬದುಕಿನ ಒತ್ತಡಗಳನ್ನು ದೂರ ಮಾಡುವ ಅದ್ಭುತ ಶಕ್ತಿಯನ್ನು ಹೊಂದಿದೆ ಎಂದು ಸಾಹಿತಿ ತಾಯಪ್ಪ ಮರ್ಚಟಹಾಳ ಅಭಿಪ್ರಾಯಪಟ್ಟರು.

ಮುಂದೆ ಓದಿ →
ರಾಯಚೂರು

ಪರಿಸರ ಕಾಳಜಿ ಬೆಳೆಸುವಲ್ಲಿ ಕವಿಗಳ ಪಾತ್ರ ಮಹತ್ವದ್ದು: ಜುಬೀನ್ ಮೊಹಾಪಾತ್ರ

ಸಾಹಿತ್ಯವು ಸಮಾಜದ ಪರಿವರ್ತನೆಗೆ ಪ್ರಬಲ ಮಾಧ್ಯಮವಾಗಿದ್ದು, ಕವಿಗಳು ತಮ್ಮ ಕಾವ್ಯ ರಚನೆಗಳ ಮೂಲಕ ಜನರಲ್ಲಿ ಪ್ರಕೃತಿ ಪ್ರೇಮ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬೀನ್ ಮೊಹಾಪಾತ್ರ ಅಭಿಪ್ರಾಯಪಟ್ಟರು.

ಮುಂದೆ ಓದಿ →
ಮಾನ್ವಿ ರಾಯಚೂರು

ಅ.26ರಂದು ವಾಲ್ಮೀಕಿ ಮಹರ್ಷಿ ಜಯಂತಿ ಅರ್ಥಪೂರ್ಣ ಆಚರಣೆಗೆ ಸಿದ್ಧತೆ: ತಹಸೀಲ್ದಾರ್ ಭೀಮರಾಯ

ಮಾನ್ವಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಅಕ್ಟೋಬರ್ 26ರಂದು ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ತಿಳಿಸಿದ್ದಾರೆ.

ಮುಂದೆ ಓದಿ →
ರಾಯಚೂರು

ಔಷಧಿ ಅಂಗಡಿಗಳ ಸಹಕಾರದೊಂದಿಗೆ ನಕಲಿ ವೈದ್ಯರಿಂದ ಚಿಕಿತ್ಸೆ: ಡಾ. ನಂದಿತಾ ಎಂ.ಎನ್. ಆತಂಕ

ಜಿಲ್ಲೆಯಲ್ಲಿ ಅಧಿಕೃತ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ನಿರಂತರ ದಾಳಿ ನಡೆಸಿ ಎಫ್‌ಐಆರ್ ದಾಖಲಿಸುತ್ತಿದೆ.

ಮುಂದೆ ಓದಿ →
ದೇವದುರ್ಗ ರಾಯಚೂರು

ಜಾಲಹಳ್ಳಿ ಗ್ರಾ.ಪಂ. ಮೀಸಲಾತಿ ಬದಲಾವಣೆಗೆ ಅವಕಾಶವಿಲ್ಲ: ಮರುಪರಿಶೀಲನಾ ಮನವಿಗೆ ಜಿಲ್ಲಾಡಳಿತದ ಹಿಂಬರಹ

ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವರ್ಗ–2ಬಿ (ಮುಸ್ಲಿಂ) ಸಮುದಾಯಕ್ಕೆ ಸೂಕ್ತ ಮೀಸಲಾತಿ ಕಲ್ಪಿಸುವಂತೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಮನವಿಗೆ ಜಿಲ್ಲಾಡಳಿತ ಹಿಂಬರಹ ನೀಡಿದ್ದು, ಪ್ರಸ್ತುತ ಮೀಸಲಾತಿ ಬದಲಾವಣೆಗೆ ಅವಕಾಶವಿಲ್ಲ ಎಂದು ತಿಳಿಸಿದೆ.

ಮುಂದೆ ಓದಿ →
ರಾಯಚೂರು

ಭಿಕ್ಷಾಟನೆ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ಸಾಯಿ ಕಿರಣ್ ಆದೋನಿ

ಭಿಕ್ಷಾಟನೆಯಲ್ಲಿ ತೊಡಗಿರುವ ನಿರ್ಗತಿಕರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು ಸರ್ಕಾರದ ಜತೆಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಓಂ ಸಾಯಿ ಧ್ಯಾನ ಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿ ಕಿರಣ್ ಆದೋನಿ ಹೇಳಿದರು.

ಮುಂದೆ ಓದಿ →
ಲಿಂಗಸುಗೂರು ರಾಯಚೂರು

ತುಂಗ ಬಿಂಬ ವರದಿ ಫಲಶ್ರುತಿ: ಅಬ್ದುಲ್ ಕಾಲೋನಿಯ ಚರಂಡಿ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು

ಹಟ್ಟಿ ಚಿನ್ನದ ಗಣಿ ಪಟ್ಟಣದ 12ನೇ ವಾರ್ಡ್‌ನ ಅಬ್ದುಲ್ ಕಾಲೋನಿಯಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದ ಕುರಿತು ತುಂಗ ಬಿಂಬ ಪತ್ರಿಕೆ ಹಾಗೂ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ಪಂದಿಸಿ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ಮುಂದೆ ಓದಿ →
ರಾಯಚೂರು

ಈಶಾನ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಪರ ಎ. ವಸಂತಕುಮಾರ ಮತಯಾಚನೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಎ.

ಮುಂದೆ ಓದಿ →
ದೇವದುರ್ಗ ರಾಯಚೂರು

ಸಮಾಜ ಸುಧಾರಣೆಗೆ ಸಮುದಾಯದ ಮುಖಂಡರ ಸಹಕಾರ ಅಗತ್ಯ: ಡಿವೈಎಸ್ಪಿ ಸುಲೇಮಾನ ಎಂ. ತಹಶೀಲ್ದಾರ್

ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಜತೆಗೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಎಲ್ಲ ಸಮುದಾಯಗಳ ಮುಖಂಡರು ಸಹಕರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ನೂತನ ಡಿವೈಎಸ್ಪಿ ಸುಲೇಮಾನ ಎಂ.

ಮುಂದೆ ಓದಿ →
ದೇವದುರ್ಗ ರಾಯಚೂರು

ತಾಲೂಕು ಮೋಚಿಗಾರ ಸಮಾಜದ ಅಧ್ಯಕ್ಷರಾಗಿ ಮನು ಅಲಬನೂರು, ಉಪಾಧ್ಯಕ್ಷರಾಗಿ ಶೈಲೇಂದ್ರ ಗುಡುಗುಂಟಿ ಆಯ್ಕೆ

ದೇವದುರ್ಗ ತಾಲೂಕು ಮೋಚಿಗಾರ ಸಮಾಜದ ನೂತನ ಅಧ್ಯಕ್ಷರಾಗಿ ಮನು ಅಲಬನೂರು ಹಾಗೂ ಉಪಾಧ್ಯಕ್ಷರಾಗಿ ಶೈಲೇಂದ್ರ ಗುಡುಗುಂಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಮುಂದೆ ಓದಿ →
ಮಂತ್ರಾಲಯ

ದುರ್ಗಾಷ್ಟಮಿ ಅಂಗವಾಗಿ ಶ್ರೀ ಮಂಚಾಲಮ್ಮ ದೇವಿಗೆ ವಿಶೇಷ ಸುಗಂಧ ದ್ರವ್ಯಾಭಿಷೇಕ

ಶರನ್ನವರಾತ್ರಿ ಮಹೋತ್ಸವದ ಪವಿತ್ರ ದುರ್ಗಾಷ್ಟಮಿ ಅಂಗವಾಗಿ ಮಂತ್ರಾಲಯದ ಶ್ರೀಮಠದಲ್ಲಿ ಶ್ರೀ ಮಂಚಾಲಮ್ಮ ದೇವಿಗೆ ಪರಮಪೂಜ್ಯ ಶ್ರೀಗಳು ವಿಶೇಷ ಸುಗಂಧ ದ್ರವ್ಯಾಭಿಷೇಕ ನೆರವೇರಿಸಿ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ಮುಂದೆ ಓದಿ →
ರಾಯಚೂರು

ಮುಂದಿನ ಪೀಳಿಗೆಗೆ ದೇಸಿ ಕಲೆಗಳನ್ನು ಉಳಿಸಿ ಬೆಳೆಸುವುದು ಅಗತ್ಯ: ಡಾ. ಬಸವರಾಜ ಕಳಸ

ಆಧುನಿಕತೆಯ ಪ್ರಭಾವದಿಂದ ಮರೆಯಾಗುತ್ತಿರುವ ನಾಡಿನ ದೇಸಿ ಕಲೆಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.

ಮುಂದೆ ಓದಿ →
ರಾಯಚೂರು

ನಶಾಮುಕ್ತ ಭಾರತ ಜಾಗೃತಿಗಾಗಿ 66 ದಿನಗಳಿಂದ ಸೈಕಲ್ ಯಾತ್ರೆ: ಡಾ. ಬಸವರಾಜ್ ಎಂ. ಪಾಟೀಲ್‌ಗೆ ಲಯನ್ಸ್ ಕ್ಲಬ್ ಸನ್ಮಾನ

ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ರಾಯಚೂರಿನಲ್ಲಿ ಸತತ 66 ದಿನಗಳಿಂದ ಸೈಕಲ್ ಅಭಿಯಾನ ನಡೆಸುತ್ತಿರುವ ಐಎಂಎ ರಾಯಚೂರು ಘಟಕದ ನೂತನ ಅಧ್ಯಕ್ಷ ಡಾ. ಬಸವರಾಜ್ ಎಂ. ಪಾಟೀಲ್ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಮುಂದೆ ಓದಿ →
ಮಾನ್ವಿ ರಾಯಚೂರು

ಅಂಬೇಡ್ಕರ್ ಅವರ ಸಮಾನತೆಯ ಸಂದೇಶ ಸಾರಲು ದೀಕ್ಷಾಭೂಮಿ ಯಾತ್ರೆ: ಸಾಹಿರಬಾನು ನದಾಫ್

ಮಾನ್ವಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ದೀಕ್ಷಾಭೂಮಿ ಯಾತ್ರೆಯ ಬಸ್‌ಗೆ ತಾಲೂಕು ಸಹಾಯಕ ನಿರ್ದೇಶಕಿ ಸಾಹಿರಬಾನು ನದಾಫ್ ಚಾಲನೆ ನೀಡಿದರು.

ಮುಂದೆ ಓದಿ →
ರಾಯಚೂರು

ಹೊಸ ಅಡುಗೆ ಅನಿಲ ಸಂಪರ್ಕಕ್ಕೆ ಅಡ್ಡಿ: ಗ್ರಾಮದಿಂದ ಪಟ್ಟಣಕ್ಕೆ ಬಂದ ಕುಟುಂಬಗಳ ಪರದಾಟ

ಉತ್ತಮ ಜೀವನೋಪಾಯ, ಉದ್ಯೋಗ, ವ್ಯಾಪಾರ ಹಾಗೂ ಮಕ್ಕಳ ಶಿಕ್ಷಣದ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳನ್ನು ತೊರೆದು ಪಟ್ಟಣಗಳಿಗೆ ಬಂದು ನೆಲೆಸುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದೀಗ ಅಡುಗೆ ಅನಿಲ ಸಂಪರ್ಕ ಪಡೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮುಂದೆ ಓದಿ →
ರಾಯಚೂರು

ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ 55ನೇ ನವರಾತ್ರಿ ಉತ್ಸವ ಸಂಭ್ರಮ

ನಗರದ ಬ್ರೇಸ್ತವಾರಪೇಟೆ ಉಪ್ಪಾರವಾಡಿಯಲ್ಲಿರುವ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ 55ನೇ ವರ್ಷದ ನವರಾತ್ರಿ ಉತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಾಯಿತು.

ಮುಂದೆ ಓದಿ →
ಮಾನ್ವಿ ರಾಯಚೂರು

ಕಲ್ಮಠದಲ್ಲಿ ಲೋಕಕಲ್ಯಾಣಕ್ಕಾಗಿ ಚಂಡಿಕಾ ಹೋಮ: ಸಾವಿರಾರು ಭಕ್ತರು ಭಾಗಿ

ಪಟ್ಟಣದ ಪ್ರಸಿದ್ಧ ಶ್ರೀ ಕಲ್ಮಠದಲ್ಲಿ 51ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ಲೋಕಕಲ್ಯಾಣ ಹಾಗೂ ನಾಡಿನ ಸುಖಶಾಂತಿ, ಸಮೃದ್ಧಿಗಾಗಿ ಶ್ರೀ ಚಂಡಿಕಾ ಹೋಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ಮುಂದೆ ಓದಿ →
ರಾಯಚೂರು

ದುಶ್ಚಟ ತ್ಯಜಿಸಿ ಉತ್ತಮ ಬದುಕು ರೂಪಿಸಿಕೊಳ್ಳಿ: ಶಾಸಕ ಬಸನಗೌಡ ದದ್ದಲ

ತಾಲೂಕಿನ ಮಮದಾಪುರ ಗ್ರಾಮದ ಶ್ರೀ ಗಧಾರ ಮಾರಿಕಾಂಭಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.

ಮುಂದೆ ಓದಿ →