ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 129,805 ಇಂದಿನ ಓದುಗರು: 475 🟢 ಈಗ ಆನ್‌ಲೈನ್: 10
LATEST NEWS

ರಾಯಚೂರು

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ ಜಿಲ್ಲೆಗಳು →
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಲೇಖನ ಮಂತ್ರಾಲಯ ಹೊಸಪೇಟೆ ಅರಕೇರಾ ಬೆಂಗಳೂರು ಬಾಗಲಕೋಟೆ ನವದೆಹಲಿ ಕಲಬುರಗಿ ಮೈಸೂರು ಗಂಗಾವತಿ ಶಹಾಪುರ ಮೀರುತ್ ಹೈದರಾಬಾದ್ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 655 ಸುದ್ದಿಗಳಲ್ಲಿ 426–450 ಸುದ್ದಿಗಳು

ರಾಯಚೂರು

ಬೆಲೆ ಏರಿಕೆ ನಿಯಂತ್ರಣಕ್ಕೆ ಜನಕೇಂದ್ರಿತ ನೀತಿ ಅಗತ್ಯ: ಜಿ. ಕುಮಾರ್ ನಾಯಕ

ರಾಯಚೂರು, ಅ.3: ದೇಶದಲ್ಲಿ ನಿರಂತರವಾಗಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆಯನ್ನು ಕಷ್ಟಕರವಾಗಿಸುತ್ತಿದ್ದು, ಅದರ ಪರಿಣಾಮ ಗ್ರಾಮೀಣ ಜನರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚಾಗಿ ಬೀಳುತ್ತಿದೆ ಎಂದು ರಾಯಚೂರು ಸಂಸದ ಜಿ. ಕುಮಾರ್ ನಾಯಕ ಹೇಳಿದ್ದಾರೆ.

ಮುಂದೆ ಓದಿ →
ರಾಯಚೂರು

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ: ಕ್ರಿಕೆಟ್‌ನಲ್ಲಿ ರಾಯಚೂರು ತಂಡ ಚಾಂಪಿಯನ್

ರಾಯಚೂರು, ಅ.3: ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಸಂಭ್ರಮಕ್ಕೆ ಕ್ರೀಡಾ ಮೆರುಗು ನೀಡುವ ನಿಟ್ಟಿನಲ್ಲಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಕರ್ತರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ (ಆರ್‌ಆರ್‌ಜಿ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮುಂದೆ ಓದಿ →
ರಾಯಚೂರು

ಚಿತ್ರಮಂದಿರದಲ್ಲಿ ತಿಂಡಿ-ಪಾನೀಯಗಳಿಗೆ ದುಬಾರಿ ದರ ಆರೋಪ: ಪರವಾನಗಿ ರದ್ದತಿಗೆ ಕರವೇ ಆಗ್ರಹ

ರಾಯಚೂರು, ಅ.3: ನಗರದ ಮಿರಜ್ ಸಿನಿಮಾಸ್ ಚಿತ್ರಮಂದಿರದಲ್ಲಿ ತಿಂಡಿ-ತಿನಿಸು ಹಾಗೂ ಪಾನೀಯಗಳಿಗೆ ಹೆಚ್ಚಿನ ದರ ವಿಧಿಸಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ಚಿತ್ರಮಂದಿರದ ವಿರುದ್ಧ ಕ್ರಮ ಕೈಗೊಂಡು ಪರವಾನಗಿ ರದ್ದುಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪಂಚಾಯತ್ ಕ್ಷೇತ್ರ ಚಿಕ್ಕಸೂಗೂರು…

ಮುಂದೆ ಓದಿ →
ರಾಯಚೂರು

ಕೆಳಭಾಗದ ರೈತರಿಗೆ ನ್ಯಾಯಯುತ ನೀರು ಸಿಗದಿದ್ದರೆ ಪಕ್ಷಾತೀತ ಹೋರಾಟ: ಶಾಸಕ ಬಸನಗೌಡ ದದ್ದಲ್

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ರಾಜಕೀಯ ಪಕ್ಷಗಳ ಭೇದ ಮರೆತು ಜನಪ್ರತಿನಿಧಿಗಳು ಒಂದಾಗಿರುವಂತೆ, ಕಾಲುವೆಯ ಕೆಳಭಾಗದ ರೈತರ ಹಿತಕ್ಕಾಗಿ ನಾವೂ ಪಕ್ಷಾತೀತವಾಗಿ ಒಂದಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಎಚ್ಚರಿಕೆ ನೀಡಿದರು.

ಮುಂದೆ ಓದಿ →
ರಾಯಚೂರು

ಕ್ರೀಡಾ ಸಂಭ್ರಮದೊಂದಿಗೆ ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವಕ್ಕೆ ಮೆರುಗು

ರಾಯಚೂರು, ಅ.3: ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಸಂಭ್ರಮಕ್ಕೆ ಕ್ರೀಡಾ ಸ್ಪರ್ಶ ನೀಡುವ ನಿಟ್ಟಿನಲ್ಲಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಪತ್ರಕರ್ತರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.

ಮುಂದೆ ಓದಿ →
ರಾಯಚೂರು

ಕೃಷಿ ವಿವಿಯಲ್ಲಿ ಗಾಂಧೀಜಿ–ಶಾಸ್ತ್ರಿ ಜಯಂತಿ ಆಚರಣೆ

ರಾಯಚೂರು, ಅ.2: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಗಣ್ಯರು ಉಭಯ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಮುಂದೆ ಓದಿ →
ರಾಯಚೂರು

ಸ್ವಾತಂತ್ರ್ಯದ ಜತೆಗೆ ಸಾಮಾಜಿಕ ಪರಿವರ್ತನೆಯೂ ಗಾಂಧೀಜಿ ಗುರಿಯಾಗಿತ್ತು: ಪ್ರೊ. ಶಿವಾನಂದ ಕೆಳಗಿನಮನಿ

ರಾಯಚೂರು, ಅ.2: ದೇಶದ ಸ್ವಾತಂತ್ರ್ಯದ ಜತೆಗೆ ಸಾಮಾಜಿಕ ಪರಿವರ್ತನೆಗೂ ಮಹಾತ್ಮ ಗಾಂಧೀಜಿ ಆದ್ಯತೆ ನೀಡಿದ್ದರು. ಸತ್ಯ, ಅಹಿಂಸೆ, ಸಮಾನತೆ ಹಾಗೂ ನೈತಿಕ ಜಾಗೃತಿಯ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕೆಂಬುದು ಅವರ ಆಶಯವಾಗಿತ್ತು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.

ಮುಂದೆ ಓದಿ →
ರಾಯಚೂರು

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ–ಶಾಸ್ತ್ರಿ ಜಯಂತಿ ಆಚರಣೆ

ರಾಯಚೂರು, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜನ್ಮದಿನಾಚರಣೆಯನ್ನು ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಉಭಯ ಮಹನೀಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಮುಂದೆ ಓದಿ →
ರಾಯಚೂರು

ಕೇಂದ್ರ ಬರ ಅಧ್ಯಯನ ತಂಡದ ಭೇಟಿ ಹಿನ್ನೆಲೆ: ಜಿಲ್ಲಾಧಿಕಾರಿ ಪೂವಿತಾ ಎಸ್. ಪೂರ್ವಭಾವಿ ಪರಿಶೀಲನೆ

ರಾಯಚೂರು, ಅ.2: ಜಿಲ್ಲೆಗೆ ಅ.4ರಂದು ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿರುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಗುರುವಾರ ತಂಡದ ಭೇಟಿಗಾಗಿ ಆಯ್ಕೆ ಮಾಡಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪೂರ್ವಭಾವಿ ಪರಿಶೀಲನೆ ನಡೆಸಿದರು.

ಮುಂದೆ ಓದಿ →
ರಾಯಚೂರು

ಜಲಜೀವನ್–ಸ್ವಚ್ಛ ಭಾರತ್ ಮಿಷನ್ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ

ರಾಯಚೂರು, ಅ.1: ಜಿಲ್ಲೆಯ ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕುಗಳಲ್ಲಿ ಜಲ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಗಳಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಭೇಟಿ ನೀಡಿ ಪ್ರಗತಿ ಹಾಗೂ ಗುಣಮಟ್ಟ ಪರಿಶೀಲಿಸಿದರು.

ಮುಂದೆ ಓದಿ →
ರಾಯಚೂರು

ಗಾಂಧೀಜಿಯವರ ಸತ್ಯಾಗ್ರಹ, ಅಹಿಂಸಾ ಮಾರ್ಗ ಇಂದಿಗೂ ಪ್ರಸ್ತುತ: ಜಿಲ್ಲಾಧಿಕಾರಿ ಪೂವಿತಾ ಎಸ್.

ರಾಯಚೂರು ಅ. 02 (ಕರ್ನಾಟಕ ವಾರ್ತೆ): ನಗರದ ಜಿಲ್ಲಾ ಕ್ರೀಡಾಂಗಣದ ಹತ್ತಿರದಲ್ಲಿರುವ ಮಹಾತ್ಮಗಾಂಧಿ ಪುತ್ಥಳಿ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಆಚರಿಸಲಾಯಿತು.

ಮುಂದೆ ಓದಿ →
ರಾಯಚೂರು

ಅ.4ರಂದು ಲಕ್ಷ್ಮಿದೇವಿ ಶಾಸ್ತ್ರಿಯವರ ಸಪ್ತ ಕೃತಿಗಳ ಲೋಕಾರ್ಪಣೆ

ರಾಯಚೂರು, ಅ.2: ಹಿರಿಯ ಸಾಹಿತಿ ಲಕ್ಷ್ಮಿದೇವಿ ಶಾಸ್ತ್ರಿ ಅವರ ಸಾಹಿತ್ಯ, ಸಂಶೋಧನೆ, ಜನಪದ ಹಾಗೂ ಸ್ಥಳೀಯ ಇತಿಹಾಸಕ್ಕೆ ಸಂಬಂಧಿಸಿದ ಏಳು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಅ.4ರಂದು ಬೆಳಿಗ್ಗೆ 10.30ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ವಿಶ್ವನಾಥ ಶಾಸ್ತ್ರಿ ತಿಳಿಸಿದರು.

ಮುಂದೆ ಓದಿ →
ರಾಯಚೂರು

ವಿಕೋಪಗಳು ‘ದೈವೇಚ್ಛೆ’ಯಲ್ಲ; ಪರಿಹಾರಕ್ಕಾಗಿ ದೆಹಲಿ ಕೃಪೆಗೆ ಕಾಯಬೇಕೆ?

ಈ ವರ್ಷ ನೇಪಾಳ ಸೇರಿದಂತೆ ದೇಶದ ಉತ್ತರ ಮತ್ತು ಈಶಾನ್ಯ ಭಾಗಗಳು ಭೀಕರ ಪ್ರವಾಹಕ್ಕೆ ಸಾಕ್ಷಿಯಾದರೆ, ರಾಯಚೂರು ಭಾಗ ಹಿಂದೆಂದೂ ಕಾಣದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮೇಲ್ನೋಟಕ್ಕೆ ಪ್ರವಾಹ ಮತ್ತು ಬರ ಪರಸ್ಪರ ವಿರುದ್ಧವಾಗಿ ಕಂಡರೂ, ಎರಡೂ ಹವಾಮಾನ ವೈಪರೀತ್ಯದಿಂದ ಎದುರಾಗುತ್ತಿರುವ ಗಂಭೀರ ಸವಾಲುಗಳ ಭಾಗವಾಗಿವೆ.

ಮುಂದೆ ಓದಿ →
ರಾಯಚೂರು

ಗಾಂಧೀಜಿ–ಶಾಸ್ತ್ರಿ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಾಬಣ್ಣ ಗಟ್ಟುಬಿಚ್ಚಾಲಿ

ಮಟಮಾರಿ: ವಿದ್ಯಾರ್ಥಿಗಳು ಕೇವಲ ಉತ್ತಮ ಅಂಕ ಗಳಿಸುವುದಕ್ಕೆ ಸೀಮಿತರಾಗದೆ, ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರಂತೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸಾಬಣ್ಣ ಗಟ್ಟುಬಿಚ್ಚಾಲಿ ಹೇಳಿದರು.

ಮುಂದೆ ಓದಿ →
ರಾಯಚೂರು

ಗಾಂಧೀಜಿ–ಶಾಸ್ತ್ರಿ ಆದರ್ಶಗಳು ಇಂದಿಗೂ ದಾರಿದೀಪ: ಜಿ.ಕೆ. ನಾಗರಾಜ

ಕಲ್ಮಲಾ: ಇಲ್ಲಿನ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.

ಮುಂದೆ ಓದಿ →
ರಾಯಚೂರು

ಗಾಂಧೀಜಿ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ: ಪಾಗುಂಟ ಬಿ. ರಾಮಯ್ಯ

ರಾಯಚೂರು, ಅ.2: ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸೇವೆ ಹಾಗೂ ಸರಳತೆಯ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆರ್ಯ ವೈಶ್ಯ ಸ್ಟೇಷನ್ ಏರಿಯಾ ಸಂಘದ ಅಧ್ಯಕ್ಷ ಪಾಗುಂಟ ಬಿ. ರಾಮಯ್ಯ ಹೇಳಿದರು.

ಮುಂದೆ ಓದಿ →
ರಾಯಚೂರು

ಶಿಯಾ ತಲಾಬ್ ನಿವಾಸಿಗಳ ಸಮಸ್ಯೆ ಆಲಿಸಿದ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು

ರಾಯಚೂರು: ನಗರದ ಶಿಯಾ ತಲಾಬ್ ವ್ಯಾಪ್ತಿಯ ವಾರ್ಡ್ ನಂ.30 ಹಾಗೂ 31ಕ್ಕೆ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಭೇಟಿ ನೀಡಿ, ಅಲ್ಲಿನ ನಿವಾಸಿಗಳು ಎದುರಿಸುತ್ತಿರುವ ವಸತಿ, ರಸ್ತೆ, ಚರಂಡಿ ಹಾಗೂ ಬೀದಿ ದೀಪ ಸೇರಿದಂತೆ ವಿವಿಧ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಶೀಲಿಸಿದರು.

ಮುಂದೆ ಓದಿ →
ರಾಯಚೂರು

ಸ್ವಚ್ಛತೆ ಜೀವನದ ಅವಿಭಾಜ್ಯ ಅಂಗವಾಗಲಿ: ಜಿ. ಮಲ್ಲಿಕಾರ್ಜುನ್

ರಾಯಚೂರು, ಅ.2: ಆರೋಗ್ಯಕರ ಜೀವನಕ್ಕೆ ಸ್ವಚ್ಛ ಪರಿಸರ ಅತ್ಯಗತ್ಯವಾಗಿದ್ದು, ಸ್ವಚ್ಛತೆಯನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಮಲ್ಲಿಕಾರ್ಜುನ್ ಹೇಳಿದರು.

ಮುಂದೆ ಓದಿ →
ರಾಯಚೂರು

ಗಾಂಧೀಜಿ–ಶಾಸ್ತ್ರಿ ಆದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪ: ರೇಖಾ ಪಾಟೀಲ

ರಾಯಚೂರು, ಅ.2: ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕು, ತತ್ವ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ರೇಖಾ ಪಾಟೀಲ ಹೇಳಿದರು.

ಮುಂದೆ ಓದಿ →
ರಾಯಚೂರು

ಶ್ರಮದಾನದೊಂದಿಗೆ ಗಾಂಧಿ–ಶಾಸ್ತ್ರಿ ಜಯಂತಿಗೆ ಅರ್ಥಪೂರ್ಣ ಆಚರಣೆ

ರಾಯಚೂರು: ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ನಗರದ ನಿಜಲಿಂಗಪ್ಪ ನಗರದ ಸಾರ್ವಜನಿಕ ಸ್ಥಳಗಳು ಮತ್ತು ಉದ್ಯಾನವನಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.

ಮುಂದೆ ಓದಿ →
ರಾಯಚೂರು

ಮಾನವೀಯ ಮೌಲ್ಯ ಬೆಳೆಸುವ ಶಿಕ್ಷಣ ವ್ಯವಸ್ಥೆ ಅಗತ್ಯ: ಅಜಯ್ ಕಾಮತ್

ರಾಯಚೂರು, ಅ.2: ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಾಗಿ ಉಳಿಯದೆ, ವಿದ್ಯಾರ್ಥಿಗಳಲ್ಲಿ ನೀತಿ, ನೈತಿಕತೆ, ವೈಚಾರಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಸಮಾಜಮುಖಿ ಹೊಸ ಪೀಳಿಗೆಯನ್ನು ರೂಪಿಸುವಂತಿರಬೇಕು ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದರು.

ಮುಂದೆ ಓದಿ →
ರಾಯಚೂರು

ಸಂಚಾರ ನಿಯಮ ಪಾಲನೆಯೇ ಸುರಕ್ಷಿತ ಪ್ರಯಾಣದ ಮೊದಲ ಹೆಜ್ಜೆ: ನವೋದಯ ಎಫ್‌ಎಂನಲ್ಲಿ ವಿಶೇಷ ಕಾರ್ಯಕ್ರಮ

ರಾಯಚೂರು: ರಸ್ತೆ ಅಪಘಾತಗಳ ತಡೆ ಹಾಗೂ ಸುರಕ್ಷಿತ ವಾಹನ ಚಾಲನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನವೋದಯ ಎಫ್‌ಎಂ 88.4 ವತಿಯಿಂದ ಅ.3ರಂದು ವಿಶೇಷ ಮಾಹಿತಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಮುಂದೆ ಓದಿ →
ರಾಯಚೂರು

ಶಾಂತಿ, ಹೋರಾಟದ ಹಾದಿಯಲ್ಲಿ ದೇಶಕ್ಕೆ ಸ್ವಾತಂತ್ರ್ಯ: ಎನ್. ಶಂಕ್ರಪ್ಪ

ರಾಯಚೂರು: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತ್ಯಾಗ, ಬಲಿದಾನ ಮಾಡಿದ್ದು, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಶಾಂತಿ ಮತ್ತು ಅಹಿಂಸೆಯ ಹೋರಾಟವೂ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಶಂಕ್ರಪ್ಪ ಹೇಳಿದರು. ಎನ್.

ಮುಂದೆ ಓದಿ →
ರಾಯಚೂರು

ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ

ರಾಯಚೂರು, ಅ.2: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಹೇರೂರು ಚಂದ್ರಾಯಗೌಡ ಮಲ್ಹಾರ ಸಿದ್ದಪ್ಪಗೌಡ ಕರೆಡ್ಡಿ ಶಿಕ್ಷಣ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು.

ಮುಂದೆ ಓದಿ →