ರಾಯಚೂರು: ನಗರದ ಬೃಹಸ್ಪತಿವಾರಪೇಟೆ ಹಾಗೂ ಮಕ್ತಲಪೇಟೆ ಮಧ್ಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಎದುರಿನ ಶಾಂಭವಿ ಚಕ್ಲಿ ಕೇಂದ್ರದಲ್ಲಿ ಮೂರನೇ ವರ್ಷದ ದೀಪಾವಳಿ ಹಬ್ಬದ ಅಂಗವಾಗಿ ವಿಶೇಷ ಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಿಲ್ಲೇಬೃಹನ್ಮಠದ ಪೂಜ್ಯ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹಾಗೂ ಸೋಮವಾರಪೇಟೆ ಹಿರೇಮಠದ ಪೂಜ್ಯ ಶ್ರೀ ಅಭಿನವ ರಾಚೋಟಿ ವೀರಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಕೃಪಾಶೀರ್ವಾದದೊಂದಿಗೆ ಶಾಂಭವಿ ಚಕ್ಲಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷೆ ಶ್ರೀದೇವಿ ಅಯ್ಯಪ್ಪಸ್ವಾಮಿ ಹಿರೇಮಠ ಪಿಕಳಿಹಾಳ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೇದಮೂರ್ತಿ ಶಿವಯ್ಯ ಶಾಸ್ತ್ರಿಗಳ ಶಿಷ್ಯರಾದ ವೇದಮೂರ್ತಿ ಪ್ರಶಾಂತ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ವಿಶೇಷ ಲಕ್ಷ್ಮೀ ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಶ್ರೀದೇವಿ ಅಯ್ಯಪ್ಪಸ್ವಾಮಿ ಹಿರೇಮಠ ಅವರ ಪುತ್ರಿ ಶಾಂಭವಿ ಹಿರೇಮಠ ಪಿಕಳಿಹಾಳ ಅವರು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಮಹಾಮಂಗಳಾರತಿ ಬೆಳಗಿದರು.
ಕಾರ್ಯಕ್ರಮದ ಅಂಗವಾಗಿ ಶಾಂಭವಿ ಚಕ್ಲಿ ಕೇಂದ್ರಕ್ಕೆ ಆಗಮಿಸಿದ ಕಿಲ್ಲೇಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಅವರು ಲಕ್ಷ್ಮೀ ದೇವಿಗೆ ಕರ್ಪೂರಾರತಿ ಬೆಳಗಿ ಸಂಸ್ಥೆಯ ಅಭಿವೃದ್ಧಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶ್ರಮ, ಪ್ರಾಮಾಣಿಕತೆ ಮತ್ತು ಗ್ರಾಹಕರ ವಿಶ್ವಾಸ ಯಾವುದೇ ಉದ್ಯಮದ ಯಶಸ್ಸಿಗೆ ಪ್ರಮುಖ ಆಧಾರಗಳಾಗಿವೆ. ಶಾಂಭವಿ ಚಕ್ಲಿ ಕೇಂದ್ರವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದಿ, ಸಾರ್ವಜನಿಕರ ವಿಶ್ವಾಸ ಗಳಿಸುವ ಮೂಲಕ ಉತ್ತಮ ಬ್ರ್ಯಾಂಡ್ ಆಗಿ ರೂಪುಗೊಳ್ಳಲಿ. ರಾಯಚೂರು ನಗರಕ್ಕೆ ಸೀಮಿತವಾಗದೆ ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿಯೂ ತನ್ನ ಉತ್ಪನ್ನಗಳ ಮೂಲಕ ಪ್ರಸಿದ್ಧಿ ಪಡೆಯುವಂತಾಗಲಿ ಎಂದು ಆಶೀರ್ವದಿಸಿದರು.
ಅಲ್ಲದೆ, ಶಾಂಭವಿ ಚಕ್ಲಿ ಕೇಂದ್ರದ ಉದ್ಯಮ ಮತ್ತು ಪ್ರಜಾ ಕೂಗು ಸುದ್ದಿ ವಾಹಿನಿಯ ಕಾರ್ಯಚಟುವಟಿಕೆಗಳಿಗೆ ನಗರದಲ್ಲಿ ಸ್ವಂತ ಕಟ್ಟಡ ಹೊಂದುವ ಕನಸು ಶೀಘ್ರ ಸಾಕಾರಗೊಳ್ಳಲಿ. ಕುಟುಂಬದ ಎಲ್ಲ ಸದಸ್ಯರಿಗೂ ಆರೋಗ್ಯ, ನೆಮ್ಮದಿ ಹಾಗೂ ಸಮೃದ್ಧಿ ದೊರೆಯಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ಅಯ್ಯಪ್ಪಸ್ವಾಮಿ ಹಿರೇಮಠ ಪಿಕಳಿಹಾಳ ಕುಟುಂಬದ ವತಿಯಿಂದ ಶ್ರೀಗಳಿಗೆ ಗೌರವಪೂರ್ವಕ ಸನ್ಮಾನ ಸಲ್ಲಿಸಿ ಆಶೀರ್ವಾದ ಪಡೆಯಲಾಯಿತು. ಶ್ರೀಗಳು ಸಹ ಪಿಕಳಿಹಾಳ ಹಿರೇಮಠ ಕುಟುಂಬದ ಸದಸ್ಯರನ್ನು ಗೌರವಿಸಿ ಶುಭಾಶೀರ್ವಾದ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ, ಗಣೇಕಲ್ ಕುಟುಂಬದವರು, ಅಸ್ಕಿಹಾಳ ಗೇಟ್ ಹಿರೇಮಠ ಕುಟುಂಬದವರು ಹಾಗೂ ಪಿಕಳಿಹಾಳ ಗಣಾಚಾರಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಮಾಧ್ಯಮ ಪ್ರತಿನಿಧಿಗಳಾದ ವಿಜಯ ಜಾಗಟಗಲ್, ಜಗನ್ನಾಥ ಪೂಜಾರ, ಭೀಮೇಶ ಪೂಜಾರ, ಶ್ರೀನಿವಾಸ, ಯಲ್ಲಪ್ಪ, ವಾಸುದೇವ, ಖಾದರ್ ಪಾಷಾ, ಅರುಣ, ಮಹಮ್ಮದ್ ಜಿಲಾನಿ, ಬಾಲು, ಶಿವಕುಮಾರ, ತುಂಗ ಬಿಂಬ ಪತ್ರಿಕೆಯ ದೇವೇಂದ್ರಮ್ಮ ದಂಪತಿ, ಶರಣಬಸವ ಹಿರೇಮಠ (ಸುರಭಿ), ಎಸ್.ಜಿ. ಕಲ್ಲಯ್ಯ ಸ್ವಾಮಿ, ವಿಶ್ವನಾಥ ಪಾಟೀಲ ಕ್ಯಾದಿಗ್ಗೇರಿ, ವಕೀಲರಾದ ರೇಖಾ ವೀರಗುಂಡಯ್ಯ ಸ್ವಾಮಿ, ವಿಶ್ವನಾಥ ಸ್ವಾಮಿ ಹಿರೇಮಠ, ಹೇಮಾ ವೀರೇಶ ಸ್ವಾಮಿ ತಂಬೂರಿಮಠ, ಪಾರ್ವತಿ ವೀರಭದ್ರಯ್ಯ ಸ್ವಾಮಿ ಹಟ್ಟಿ, ಚಂದ್ರಶೇಖರಯ್ಯ ಸ್ವಾಮಿ ಗಬ್ಬೂರು, ವೀರೇಶ ಬಳಿಗೇರ, ಮಾನಸ, ಭಾರತಿ, ವಿಶ್ವನಾಥ ಶೆಟ್ಟಿ ಮೆಡಿಕಲ್ ಸ್ಟೋರ್, ಜಿ. ವೆಂಕಟೇಶ ಮಡಿವಾಳ, ಮಂಜುನಾಥ ಚಲುವಾದಿ, ಕಿಶೋರ ಜೈನ್, ಗಂಗಾಧರ ಸ್ವಾಮಿ, ಬಿಂದುಶ್ರೀ ಸೇರಿದಂತೆ ಹಲವಾರು ಬಂಧುಮಿತ್ರರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಲಕ್ಷ್ಮೀ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಚಕ್ಲಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮವು ಭಕ್ತಿಭಾವ, ಸಾಂಪ್ರದಾಯಿಕ ಆಚರಣೆ ಹಾಗೂ ಕುಟುಂಬ ಸದಸ್ಯರು ಮತ್ತು ಹಿತೈಷಿಗಳ ಉಪಸ್ಥಿತಿಯಲ್ಲಿ ನೆರವೇರಿತು.



